•  
  •  
  •  
  •  
Index   ವಚನ - 1249    Search  
 
ಜಂಗಮವೆ ಪ್ರಾಣವೆಂದರಿದ ಭಕ್ತಂಗೆ, ಜಂಗಮಪ್ರಸಾದವಲ್ಲದೆ ಲಿಂಗಪ್ರಸಾದವ ಕೊಳಲಾಗದು. ಜಂಗಮಪ್ರಸಾದ ಲಿಂಗಕ್ಕೆ ಸಲ್ಲದೆಂದು ಶಂಕಿಸಲಾಗದು. ಅದೆಂತೆಂದಡೆ: "ಜಂಗಮಾದಿ ಗುರೂಣಾಂ ಚ ಅನಾದಿ ಸ್ವಯಲಿಂಗವತ್| ಆದಿಪ್ರಸಾದವಿರೋಧೇತು ಇಷ್ಟೋಚ್ಛಿಷ್ಟಂತು ಕಿಲ್ಬಿಷಮ್"|| ಎಂದುದಾಗಿ, ಪ್ರಾಣ ಭಾವದಲ್ಲಿ ಸಂಬಂಧವಾಗಿ ಇಷ್ಟಕ್ಕೂ ಸಂದಿತ್ತು. ಈ ಭೇದವನರಿದು ಜಂಗಮಪ್ರಸಾದವಿಲ್ಲದೆ ಲಿಂಗಪ್ರಸಾದವ ಕೊಳಲಾಗದು ಕೂಡಲಚೆನ್ನಸಂಗಮದೇವಾ.
Transliteration Jaṅgamave prāṇavendarida bhaktaṅge, jaṅgamaprasādavallade liṅgaprasādava koḷalāgadu. Jaṅgamaprasāda liṅgakke salladendu śaṅkisalāgadu. Adentendaḍe: Jaṅgamādi gurūṇāṁ ca anādi svayaliṅgavat| ādiprasādavirōdhētu iṣṭōcchiṣṭantu kilbiṣam|| endudāgi, prāṇa bhāvadalli sambandhavāgi iṣṭakkū sandittu. Ī bhēdavanaridu jaṅgamaprasādavillade liṅgaprasādava koḷalāgadu kūḍalacennasaṅgamadēvā.