ತಂಗುಳು ಬುತ್ತಿಯ ಕಟ್ಟಿ ಹೊಟ್ಟೆಯ
ಮೇಲಿಕ್ಕಿಕೊಂಡಿರ್ದಡೆ
ಹಸಿವು ಹೋಗಿ ಅಪ್ಯಾಯನವಹುದೆ?
ಅಂಗದ ಮೇಲೆ ಲಿಂಗವಿದ್ದಲ್ಲಿ ಫಲವೇನು?
ಅಂಗವೂ ಲಿಂಗವೂ ಕೂಡುವ ಭೇದವನರಿಯದವರು
ಗುರುತಲ್ಪಕರು, ಪಂಚಮಹಾಪಾತಕರು.
ಅದೆಂತೆಂದಡೆ:
"ದ್ವೈತಭಾವಿತದುಃಖಾನಾಮದ್ವೈತಂ ಪರಮಂ ಪದಮ್|
ಭಾರಮನ್ನಂ ಪಥಿ ಶ್ರಾಂತೇ ತಸ್ಮಿನ್ ಭುಂಕ್ತೇ ಸುಖಾವಹಮ್"||
ಮತ್ತೆಯೂ "ಅಂಗಾನಾಂಲಿಂಗಸಂಬಂಧೋಲಿಂಗಾನಾಮಂಗಸಂಯುತಿಃ|
ನಿಮಿಷಾರ್ಧ ವಿಯೋಗೇನ ನರಕೇ ಕಾಲಮಕ್ಷಯಂ"|| ಎಂದುದಾಗಿ,
ಅಂಗದಲ್ಲಿ ಲಿಂಗ ಒಡಗಲಸಬೇಕು,
ಲಿಂಗದಲ್ಲಿ ಅಂಗ ಒಡಗಲಸಬೇಕು.
ಇದು ಕಾರಣ, ಎಲ್ಲರೂ ಅಂಗಸಂಬಂಧಿಗಳಲ್ಲದೆ
ಲಿಂಗಸಂಬಂಧಿಗಳಪೂರ್ವ ಕಾಣಾ-
ಕೂಡಲಚೆನ್ನಸಂಗಮದೇವಾ.
Transliteration Taṅguḷu buttiya kaṭṭi hoṭṭeya
mēlikkikoṇḍirdaḍe
hasivu hōgi apyāyanavahude?
Aṅgada mēle liṅgaviddalli phalavēnu?
Aṅgavū liṅgavū kūḍuva bhēdavanariyadavaru
gurutalpakaru, pan̄camahāpātakaru.
Adentendaḍe:
Dvaitabhāvitaduḥkhānāmadvaitaṁ paramaṁ padam|
bhāramannaṁ pathi śrāntē tasmin bhuṅktē sukhāvaham||
Matteyūaṅgānānliṅgasambandhōliṅgānāmaṅgasanyutiḥ|
nimiṣārdha viyōgēna narakē kālamakṣayaṁ|| endudāgi,
aṅgadalli liṅga oḍagalasabēku,
liṅgadalli aṅga oḍagalasabēku.
Idu kāraṇa, ellarū aṅgasambandhigaḷallade
liṅgasambandhigaḷapūrva kāṇā-
kūḍalacennasaṅgamadēvā.