•  
  •  
  •  
  •  
Index   ವಚನ - 1266    Search  
 
ತನ್ನ ತಾನರಿದ ಶಿವಯೋಗಿಯ ಪರಿಯೆಂತೆಂದಡೆ: ದೇಹಿ ತಾನಲ್ಲ, ಜಾತಿಜಾತಕಂಗಳು ತಾನಲ್ಲ, ಪ್ರಾಣ ತಾನಲ್ಲ, ದಶವಾಯುಗಳು ತಾನಲ್ಲ, ಇಂದ್ರಿಯಂಗಳು ತಾನಲ್ಲ, ಗುಣತ್ರಯಂಗಳು ತಾನಲ್ಲ. ಅಂತಃಕರಣ ಚತುಷ್ಟಯಂಗಳು ತಾನಲ್ಲವೆಂದರಿದು ವಿವರಿಸಿ ಕಳೆದು, ತನ್ನ ನಿಜಸ್ವರೂಪ ತಾನೇ ನೋಡಿ ಕಂಡು; ಜೀವಾತ್ಮ ಅಂತರಾತ್ಮ ಪರಮಾತ್ಮ ಮತ್ತಂ ಭೂತಾತ್ಮ ಶುದ್ಧಾತ್ಮ ನಿರ್ಮಲಾತ್ಮ ಸತ್ಯಾತ್ಮ ಮಹಾತ್ಮವೆಂಬ ಅಷ್ಟ ಆತ್ಮೇಶ್ವರರು ಏಕಾರ್ಥವೆಂದರಿದು, ಅಲ್ಲಿಯೆ ತಲ್ಲೀಯವಾಗಿಹುದೀಗ ಯೋಗ ಕಾಣಾ, ಕೂಡಲಚೆನ್ನಸಂಗಮದೇವಾ.
Transliteration Tanna tānarida śivayōgiya pariyentendaḍe: Dēhi tānalla, jātijātakaṅgaḷu tānalla, prāṇa tānalla, daśavāyugaḷu tānalla, indriyaṅgaḷu tānalla, guṇatrayaṅgaḷu tānalla. Antaḥkaraṇa catuṣṭayaṅgaḷu tānallavendaridu vivarisi kaḷedu, tanna nijasvarūpa tānē nōḍi kaṇḍu; jīvātma antarātma paramātma mattaṁ bhūtātma śud'dhātma nirmalātma satyātma mahātmavemba aṣṭa ātmēśvararu ēkārthavendaridu, alliye tallīyavāgihudīga yōga kāṇā, kūḍalacennasaṅgamadēvā.