•  
  •  
  •  
  •  
Index   ವಚನ - 1287    Search  
 
ತನುವಿಡಿದು ನಡೆವ ತ್ರಿವಿಧ ಸಂಪತ್ತುಗಳು ಭಕ್ತ ಮಹೇಶ್ವರ ಪ್ರಸಾದಿ; ಮನವಿಡಿದು ನಡೆವ ತ್ರಿವಿಧ ಸಂಪತ್ತುಗಳು ಪ್ರಾಣಲಿಂಗಿ ಶರಣ ಐಕ್ಯ. ಈ ಉಭಯದನುಭವವಿಡಿದು "ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ"| ಎಂಬ, ಈ ಭೇದವ ಭೇದಿಸಬಲ್ಲಡೆ ಹಿಂದಿಲ್ಲ ಮುಂದಿಲ್ಲ, ಇಹ ಪರ ಒಂದೆ, ಕರ್ಮ ನಾಸ್ತಿ ಭವಂ ನಾಸ್ತಿ. ಕೂಡಲಚೆನ್ನಸಂಗ ಸ್ವಾಯತವಾದವಂಗೆ ಇದು ಸಹಜ.
Transliteration Tanuviḍidu naḍeva trividha sampattugaḷu bhakta mahēśvara prasādi; manaviḍidu naḍeva trividha sampattugaḷu prāṇaliṅgi śaraṇa aikya. Ī ubhayadanubhavaviḍidu sthāvaraṁ jaṅgamaścaiva dvividhaṁ liṅgamucyatē| emba, ī bhēdava bhēdisaballaḍe hindilla mundilla, iha para onde, karma nāsti bhavaṁ nāsti. Kūḍalacennasaṅga svāyatavādavaṅge idu sahaja.