ನೀ ನಿಲಿಸಿದಲ್ಲಿ ನಾನಂಜೆ
ನಾನಂಜೆ ನಾನಂಜೆನಯ್ಯಾ
ಘನವು ಮಹಾಘನಕ್ಕೆ ಶರಣು ಹೊಕ್ಕುದಾಗಿ.
ನೀ ನಿಲಿಸಿದ ಧನದಲ್ಲಿ ನಾನಂಜೆ ನಾನಂಜೆನಯ್ಯಾ,
ಧನವು ಸತಿಸುತ ಮಾತಾಪಿತರಿಗೆ ಹೋಗದಾಗಿ.
ನೀ ನಿಲಿಸಿದ ತನುವಿನಲ್ಲಿ ನಾನಂಜೆ ನಾನಂಜೆನಯ್ಯಾ,
ತನು ಸರ್ವಾರ್ಪಿತದಲ್ಲಿ ನಿಹಿತಪ್ರಸಾದಭೋಗಿಯಾಗಿ,
ಇಂತೆಲ್ಲರ ಧೀರಸಮಗ್ರನಾಗಿ,
ಕೂಡಲಚೆನ್ನಸಂಗಮದೇವಾ, ನಿಮಗಾನಂಜೆನು.
Transliteration Nī nilisidalli nānan̄je
nānan̄je nānan̄jenayyā
ghanavu mahāghanakke śaraṇu hokkudāgi.
Nī nilisida dhanadalli nānan̄je nānan̄jenayyā,
dhanavu satisuta mātāpitarige hōgadāgi.
Nī nilisida tanuvinalli nānan̄je nānan̄jenayyā,
tanu sarvārpitadalli nihitaprasādabhōgiyāgi,
intellara dhīrasamagranāgi,
kūḍalacennasaṅgamadēvā, nimagānan̄jenu.