•  
  •  
  •  
  •  
Index   ವಚನ - 1354    Search  
 
ನೇಮಸ್ತನಿಂದ ಮಹಾಪಾಪಿ ಲೇಸು, ಅವನಿಂದ ಭೂಮಿಯ ಮೇಲೆ ಹುಟ್ಟಿದ ಸಮಸ್ತಪ್ರಾಣಿಯ ಕೊಲುವ ವ್ಯಾಧ ಲೇಸು. ಅವನಿಂದ ಅನಂತಕೋಟಿ ನರಕವನೈದುವರು, ಆ ನೇಮಸ್ತನೆಂಬ ಮಹಾಪಾಪಿಯ ಮುಖವ ನೋಡಿ ಅವನ ಒಡಗೂಡಿಕೊಂಡು ನಡೆದವರು; ಅದೆಂತೆಂದಡೆ: "ನೇಮಸ್ತಯೋ ಮಹಾಪಾಪೀ ತೇನ ದರ್ಶಂತೇ ಯೋ ನರಃ| ಭೌತಿಕಂ ತತ್ತ್ವಪರ್ಯಂತಂ ನರಕಂ ಯಾಂತಿ ಸ ಧ್ರುವಂ"|| ಇಂತೆಂದುದಾಗಿ- ಇದು ಕಾರಣ ಕೂಡಲಚೆನ್ನಸಂಗಯ್ಯಾ ನೇಮಸ್ತರಾದ ಪಾಪಿಗಳನೆನಗೆ ತೋರದಿರಯ್ಯಾ.
Transliteration Nēmastaninda mahāpāpi lēsu, avaninda bhūmiya mēle huṭṭida samastaprāṇiya koluva vyādha lēsu. Avaninda anantakōṭi narakavanaiduvaru, ā nēmastanemba mahāpāpiya mukhava nōḍi avana oḍagūḍikoṇḍu naḍedavaru; adentendaḍe: Nēmastayō mahāpāpī tēna darśantē yō naraḥ| bhautikaṁ tattvaparyantaṁ narakaṁ yānti sa dhruvaṁ|| intendudāgi- idu kāraṇa kūḍalacennasaṅgayyā nēmastarāda pāpigaḷanenage tōradirayyā.