•  
  •  
  •  
  •  
Index   ವಚನ - 1379    Search  
 
ಪರುಷವ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ, ಅತೀತನ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ, ಆನಂದನ ಬಂಧನಕ್ಕೆ ತಂದಿರಿಸಿಕೊಂಡಾತ ನೀನಯ್ಯಾ, ಬ್ರಹ್ಮನಿದ್ದಲ್ಲಿ ಪರುಷವನಿರಿಸಿದೆ, ವಿಷ್ಣುವಿದ್ದಲ್ಲಿ ಅತೀತವನಿರಿಸಿದೆ, ರುದ್ರನಿದ್ದಲ್ಲಿ ಆನಂದವನಿರಿಸಿದೆ. ಈ ತ್ರಿವಿಧಧ್ಯಾನವರ್ಣನೆ ನಷ್ಟವಾದ ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಮಡಿವಾಳ ಬಸವಣ್ಣನೆಂಬೆರಡು ಶಬ್ದಪ್ರಸಾದವೆನಗದೆ ಅಳವಟ್ಟಿತ್ತು.
Transliteration Paruṣava bandhanakke tandirisikoṇḍāta nīnayyā, atītana bandhanakke tandirisikoṇḍāta nīnayyā, ānandana bandhanakke tandirisikoṇḍāta nīnayyā, brahmaniddalli paruṣavaniriside, viṣṇuviddalli atītavaniriside, rudraniddalli ānandavaniriside. Ī trividhadhyānavarṇane naṣṭavāda kāraṇa kūḍalacennasaṅgayyanalli maḍivāḷa basavaṇṇanemberaḍu śabdaprasādavenagade aḷavaṭṭittu.