•  
  •  
  •  
  •  
Index   ವಚನ - 1388    Search  
 
ಪೃಥ್ವ್ಯಾದಿಪಂಚತತ್ತ್ವಕ್ಕೆ ಇಪ್ಪತ್ತೈದು ಗುಣಂಗಳು ಸಹಿತ ಮೂವತ್ತನೊಳಗು ಮಾಡದೆ ಪ್ರಾಣಾದಿ ಪಂಚವಾಯುವಂ ಸತ್ಪ್ರಾಣವಂ ಮಾಡಿ, ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ಈ ಐವರನು ಭೂತಗ್ರಾಮಂಗಳಿಂದರಿದು, ಶ್ರೋತ್ರದಿಂ ಪಂಚಜ್ಞಾನೇಂದ್ರಿಯಂಗಳ ವ್ಯವಹಾರವನರಿದು, ಮುಂದರಿವುದು ನಾದ ಅನಾದ ಸುನಾದ ಮಹಾನಾದ ಅನಾಹತನಾದವೆಂಬ ನಾದಪಂಚಕದಿಂದ ನಿರತನಾಗಿ, ಗರ್ಭ ಸಂಸಾರ ದೇಹ ದಾರಿದ್ರ ದುಮ್ಮಲವೆಂಬ ಪಂಚ ಉಪಾಯಂಗಳ ಹೊದ್ದಲೀಯದೆ, ದೇಹ ಶಿರ ಮುಖ ಪಾಣಿ ಚರಣವೆಂಬ ಪಂಚಾಂಗ ಹೀನನಾಗದೆ ಅವಯವ ಸಂಪೂರ್ಣನಾಗಿ, ಇಂತೀ ಪಂಚತತ್ತ್ವದ ಗುಣ ಇಪ್ಪತ್ತೈದು, ಪಂಚಸಂಪಾದನೆ ನಾಲ್ವತ್ತೈದು, ಇದರ ಅನುಭಾವಿ ಬಸವಣ್ಣ, ಮಹಾನುಭಾವಿ ಪ್ರಭುದೇವರು. ಇವರಿಬ್ಬರ ಸಂಗದಿಂದ ನಾನು ಸ್ವಯಾನುಭಾವಿಯಾದೆನು ಕಾಣಾ, ಕೂಡಲಚೆನ್ನಸಂಗಮದೇವಾ.
Transliteration Pr̥thvyādipan̄catattvakke ippattaidu guṇaṅgaḷu sahita mūvattanoḷagu māḍade prāṇādi pan̄cavāyuvaṁ satprāṇavaṁ māḍi, nāga kūrma kr̥kara dēvadatta dhanan̄jayavemba ī aivaranu bhūtagrāmaṅgaḷindaridu, śrōtradiṁ pan̄cajñānēndriyaṅgaḷa vyavahāravanaridu, mundarivudu nāda anāda sunāda mahānāda anāhatanādavemba nādapan̄cakadinda niratanāgi, garbha sansāra dēha dāridra dum'malavemba pan̄ca upāyaṅgaḷa hoddalīyade, dēha śira mukha pāṇi caraṇavemba pan̄cāṅga hīnanāgade Avayava sampūrṇanāgi, intī pan̄catattvada guṇa ippattaidu, pan̄casampādane nālvattaidu, idara anubhāvi basavaṇṇa, mahānubhāvi prabhudēvaru. Ivaribbara saṅgadinda nānu svayānubhāviyādenu kāṇā, kūḍalacennasaṅgamadēvā.