ಪ್ರಸಾದಿಗೆ ಅಗ್ನಿಯೆ ಅಂಗ,
ಆ ಅಂಗಕ್ಕೆ ನಿರಹಂಕಾರವೆ ಹಸ್ತ,
ಆ ಹಸ್ತಕ್ಕೆ ಮೂರ್ತಿಸಾದಾಖ್ಯ,
ಆ ಸಾದಾಖ್ಯಕ್ಕೆ ಇಚ್ಛಾಶಕ್ತಿ,
ಆ ಶಕ್ತಿಗೆ ಶಿವನೆ ಲಿಂಗ, ಆ ಲಿಂಗಕ್ಕೆ ವಿದ್ಯೆಯೆ ಕಳೆ,
ಆ ಕಳೆಗೆ ನೇತ್ರೇಂದ್ರಿಯವೆ ಮುಖ,
ಆ ಮುಖಕ್ಕೆ ಸುರೂಪುದ್ರವ್ಯಂಗಳನು
ರೂಪು ರುಚಿ ತೃಪ್ತಿಯನರಿದು,
ಅವಧಾನಭಕ್ತಿಯಿಂದರ್ಪಿಸಿ
ಆ ಸುರೂಪಪ್ರಸಾದವನು
ಭೋಗಿಸಿ ಸುಖಿಸುತಿಹನು
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ.
Transliteration Prasādige agniye aṅga,
ā aṅgakke nirahaṅkārave hasta,
ā hastakke mūrtisādākhya,
ā sādākhyakke icchāśakti,
ā śaktige śivane liṅga, ā liṅgakke vidyeye kaḷe,
ā kaḷege nētrēndriyave mukha,
ā mukhakke surūpudravyaṅgaḷanu
rūpu ruci tr̥ptiyanaridu,
avadhānabhaktiyindarpisi
ā surūpaprasādavanu
bhōgisi sukhisutihanu
kūḍalacennasaṅgā nim'ma prasādi.