ಬೆಲ್ಲದ ನೀರೆರೆದಡೇನು, ಬೇವು ಸಿಹಿಯಪ್ಪುದೆ?
ಕತ್ತುರಿಯ ಲೇಪನವಿತ್ತಡೇನು,
ನೀರುಳ್ಳೆಯ ದುರ್ಗಂಧ ದೂರಪ್ಪುದೆ?
ಕಸುಗಾಯ ಹಿಸುಕಿದಡೇನು, ಹಣ್ಣಿಗೆ ಹವಣಪ್ಪುದೆ?
ಕಿರಿಯ ಮನದ ಮಾನವಂಗೆ ಬಹಿರಂಗದ
ಬರಿಯ ಸಂಸ್ಕಾರವಾದಡೇನು,
ಭವಿಯಾಗಿಪ್ಪನಲ್ಲದೆ ಭಕ್ತನಪ್ಪನೆ,
ಕೂಡಲಚೆನ್ನಸಂಗಮದೇವಾ
ಪೂರ್ವಗುಣವಳಿದು ಪುನರ್ಜಾತನಾಗದನ್ನಕ್ಕ?
Transliteration Bellada nīreredaḍēnu, bēvu sihiyappude?
Katturiya lēpanavittaḍēnu,
nīruḷḷeya durgandha dūrappude?
Kasugāya hisukidaḍēnu, haṇṇige havaṇappude?
Kiriya manada mānavaṅge bahiraṅgada
bariya sanskāravādaḍēnu,
bhaviyāgippanallade bhaktanappane,
kūḍalacennasaṅgamadēvā
pūrvaguṇavaḷidu punarjātanāgadannakka?