ಭಕ್ತ, ಭೃತ್ಯನಾಗಿ ಮಾಡುವ
ಮಾಟದಲ್ಲಿ ವಿಚಾರವುಂಟಯ್ಯಾ,
ಅದೆಂತೆಂದರೆ:ಸಂಸಾರಚ್ಛೇದನೆಯುಳ್ಳರೆ
ಜಂಗಮಲಿಂಗವಹುದು,
ಅದಕ್ಕೆ ಮಾಡಿದ ಫಲಂ ನಾಸ್ತಿ.
ಸಂಸಾರಚ್ಛೇದನೆ ಇಲ್ಲದಿದ್ದರೆ ಆ ಜಂಗಮ ಭವಭಾರಿಯಹನು.
ಅದಕ್ಕೆ ಮಾಡಿದಲ್ಲಿ ಫಲವುಂಟು.
ಫಲವುಂಟಾದಲ್ಲಿ ಭವ ಉಂಟು, ಫಲವಿಲ್ಲದಲ್ಲಿ ಭವವಿಲ್ಲ.
`ಮನದಂತೆ ಮಂಗಳ' ಎಂಬ ಶ್ರುತಿಯ ದಿಟವ ಮಾಡಿ,
ಈ ಉಭಯದೊಳಗೆ ಆವುದ ಪ್ರಿಯವಾಗಿ
ಮಾಡುವರು ಅಹಂಗೆ ಇಹರು ಕಾಣಾ,
ಕೂಡಲಚೆನ್ನಸಂಗಮದೇವಾ.
Transliteration Bhakta, bhr̥tyanāgi māḍuva
māṭadalli vicāravuṇṭayyā,
adentendare:Sansāracchēdaneyuḷḷare
jaṅgamaliṅgavahudu,
adakke māḍida phalaṁ nāsti.
Sansāracchēdane illadiddare ā jaṅgama bhavabhāriyahanu.
Adakke māḍidalli phalavuṇṭu.
Phalavuṇṭādalli bhava uṇṭu, phalavilladalli bhavavilla.
`Manadante maṅgaḷa' emba śrutiya diṭava māḍi,
ī ubhayadoḷage āvuda priyavāgi
māḍuvaru ahaṅge iharu kāṇā,
kūḍalacennasaṅgamadēvā.