•  
  •  
  •  
  •  
Index   ವಚನ - 1516    Search  
 
ಮಾಡಬಾರದ ಭಕ್ತಿಯನೆ ಮಾಡಿ, ನೋಡಬಾರದ ನೋಟವನೆ ಕೂಡಿ, ಸ್ತುತಿಸುವರೆ ಸ್ತುತಿಗೆ ಬಾರದೆ, ಮುಟ್ಟುವ[ರೆ] ಮುಟ್ಟಬಾರದೆ ಬಟ್ಟಬಯಲಾಗಿ ಹೋದ ಮರುಳುಶಂಕರದೇವರ ಮಹಾತ್ಮೆಗೆ ನಮೋ ನಮೋ ಎಂದು ಬದುಕಿದೆನು ಕಾಣಾ, ಕೂಡಲಚೆನ್ನಸಂಗಮದೇವಾ.
Transliteration Māḍabārada bhaktiyane māḍi, nōḍabārada nōṭavane kūḍi, stutisuvare stutige bārade, muṭṭuva[re] muṭṭabārade baṭṭabayalāgi hōda maruḷuśaṅkaradēvara mahātmege namō namō endu badukidenu kāṇā, kūḍalacennasaṅgamadēvā.