•  
  •  
  •  
  •  
Index   ವಚನ - 1620    Search  
 
ವೇಷದಲ್ಲಿ ಮಾತನಾಡುವರಲ್ಲದೆ, ಭಾಷೆಯಲ್ಲಿ ಮಾತನಾಡುವವರನಾರನೂ ಕಾಣೆ. ಹಿರಿಯರೆಂಬ ಹೆಸರು, ಹಿರಿಯತನಕ್ಕೆ ಕರ್ಮ, ಪ್ರಳಯ ಬಂದಿತ್ತಲ್ಲಾ ಸಾಯದಿಪ್ಪರೆ? ಸತ್ಯವನೆ ಮರೆದು, ಅಸತ್ಯವ ಹಿಡಿದು ನಿತ್ಯವರಿಯದ, ನಾಮದ ನೇಮದ ಹಿರಿಯರೆಲ್ಲ ಸತ್ತರಲ್ಲಾ-ಕೂಡಲಚೆನ್ನಸಂಗಮದೇವಾ.
Transliteration Vēṣadalli mātanāḍuvarallade, bhāṣeyalli mātanāḍuvavaranāranū kāṇe. Hiriyaremba hesaru, hiriyatanakke karma, praḷaya bandittallā sāyadippare? Satyavane maredu, asatyava hiḍidu nityavariyada, nāmada nēmada hiriyarella sattarallā-kūḍalacennasaṅgamadēvā.