ಶಿಲೆ ಸ್ಥಾವರ ಮುಂತಾದುವಕ್ಕೆ ಅಪ್ಪುವೆ ಬೀಜ.
ಸಕಲ ಚೇತನಾದಿ ರೂಪುಗೊಂಡುವಕ್ಕೆ ವಸ್ತುವೆ ಬೀಜ.
ಆ ವಸ್ತು ಜಗದ ಹಿತಾರ್ಥ ಪೀಠಸಂಬಂಧಿಯಾಗಿ
'ಏಕಮೂರ್ತಿಸ್ತ್ರಯೋ ಭಾಗಾಃ' ಆಗಲಾಗಿ
ವರ್ತುಳ ಗುರುವಾಗಿ,
ಗೋಮುಖ ಜಂಗಮವಾಗಿ
ಗೋಳಕಾಕಾರಮೂರ್ತಿ
ಲಿಂಗವಾದ ಕಾರಣ, ಲಿಂಗವಾಯಿತ್ತು.
ಇಂತೀ ತ್ರಿವಿಧದೊಳಗೆ ಒಂದ ಮೀರಿ
ಒಂದ ಕಂಡೆಹೆನೆಂದಡೆ
ಬೀಜವಿಲ್ಲದ ಅಂಕುರ, ಅಂಕುರವಿಲ್ಲದ ಬೀಜ.
ಅಂಕುರ ಬೀಜವಿರೆ,
ಅಪ್ಪು ಪೃಥ್ವಿ ಸಾಕಾರವಿಲ್ಲದಿರೆ ಅಂಕುರಕ್ಕೆ ದೃಷ್ಟವಿಲ್ಲ.
ಕೂಡಲಚೆನ್ನಸಂಗಮದೇವರಿರುತಿರಲಿಕ್ಕೆ
ಗುರು-ಲಿಂಗ-ಜಂಗಮವೆಂಬ ಭಾವ ಒಡಲಾಯಿತ್ತು.
Transliteration Śile sthāvara muntāduvakke appuve bīja.
Sakala cētanādi rūpugoṇḍuvakke vastuve bīja.
Ā vastu jagada hitārtha pīṭhasambandhiyāgi
'ēkamūrtistrayō bhāgāḥ' āgalāgi
vartuḷa guruvāgi,
gōmukha jaṅgamavāgi
gōḷakākāramūrti
liṅgavāda kāraṇa, liṅgavāyittu.
Intī trividhadoḷage onda mīri
onda kaṇḍ'̔ehenendaḍe
bījavillada aṅkura, aṅkuravillada bīja.
Aṅkura bījavire,
appu pr̥thvi sākāravilladire aṅkurakke dr̥ṣṭavilla.
Kūḍalacennasaṅgamadēvarirutiralikke
guru-liṅga-jaṅgamavemba bhāva oḍalāyittu.