•  
  •  
  •  
  •  
Index   ವಚನ - 1643    Search  
 
ಶಿವಲಿಂಗಮೋಹಿತನಾದಡೆ ಅನ್ಯಮೋಹವ ಮರೆಯಬೇಕು. ಶಿವಲಿಂಗ ಭಕ್ತನಾದಡೆ ಅನ್ಯದೈವದ ಭಜನೆ ಮಾಡಲಾಗದು. ಶಿವಲಿಂಗಪೂಜಕನಾದಡೆ ಅನ್ಯದೈವದ ಪೂಜೆಯ ಮಾಡಲಾಗದು. ಶಿವಲಿಂಗವೀರನಾದಡೆ ಪುಣ್ಯಕ್ಷೇತ್ರಂಗಳ ಕುರಿತು ಹೋಗಲಾಗದು. ಶಿವಲಿಂಗಪ್ರಸಾದಿಯಾದಡೆ ಅಂಗಭೋಗವ ಮರೆಯಬೇಕು. ಶಿವಲಿಂಗಪ್ರಾಣಿಯಾದಡೆ ಪರಸತಿಸಂಗವ ಮಾಡಲಾಗದು. ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಶಿವಲಿಂಗಭಕ್ತಿ.
Transliteration Śivaliṅgamōhitanādaḍe an'yamōhava mareyabēku. Śivaliṅga bhaktanādaḍe an'yadaivada bhajane māḍalāgadu. Śivaliṅgapūjakanādaḍe an'yadaivada pūjeya māḍalāgadu. Śivaliṅgavīranādaḍe puṇyakṣētraṅgaḷa kuritu hōgalāgadu. Śivaliṅgaprasādiyādaḍe aṅgabhōgava mareyabēku. Śivaliṅgaprāṇiyādaḍe parasatisaṅgava māḍalāgadu. Idu kāraṇa- kūḍalacennasaṅgayyanalli ī āru sahita śivaliṅgabhakti.