ಶೀಲಶೀಲವೆಂಬ ಅಣ್ಣಗಳ ನೀವು ಕೇಳಿರೊ:
ಕಾಮ ಒಂದನೆಯ ಭವಿ,
ಕ್ರೋಧ ಎರಡನೆಯ ಭವಿ,
ಲೋಭ ಮೂರನೆಯ ಭವಿ,
ಮೋಹ ನಾಲ್ಕನೆಯ ಭವಿ,
ಮದ ಐದನೆಯ ಭವಿ,
ಮತ್ಸರ ಆರನೆಯ ಭವಿ.
ಇಂತೀ ಷಡ್ವಿಧಭವಿಯ ತಮ್ಮ ಎದೆಯೊಳಗೆ ಇಂಬಿಟ್ಟುಕೊಂಡು
ಅಂಗದ ಮೇಲೆ ಅವರಿಗೆ ಲಿಂಗವುಂಟೊ? ಇಲ್ಲವೊ?
ಎಂಬ ಜಗಭಂಡರು ನೀವು ಕೇಳಿರೊ:
ಅಚ್ಚಪ್ರಸಾದಿ ನಿಚ್ಚಪ್ರಸಾದಿ!
ಜಲವನೆ ಹೊಕ್ಕು ಕನ್ನವನಿಕ್ಕಿ ಅಗ್ಗಣಿಯ ತಂದು
ಮಜ್ಜನಕ್ಕೆ ನೀಡುವ ಹಗಲುಗಳ್ಳರ ಮೆಚ್ಚುವನೆ
ಕೂಡಲಚೆನ್ನಸಂಗಮದೇವ.
Transliteration Śīlaśīlavemba aṇṇagaḷa nīvu kēḷiro:
Kāma ondaneya bhavi,
krōdha eraḍaneya bhavi,
lōbha mūraneya bhavi,
mōha nālkaneya bhavi,
mada aidaneya bhavi,
matsara āraneya bhavi.
Intī ṣaḍvidhabhaviya tam'ma edeyoḷage imbiṭṭukoṇḍu
aṅgada mēle avarige liṅgavuṇṭo? Illavo?
Emba jagabhaṇḍaru nīvu kēḷiro:
Accaprasādi niccaprasādi!
Jalavane hokku kannavanikki aggaṇiya tandu
majjanakke nīḍuva hagalugaḷḷara meccuvane
kūḍalacennasaṅgamadēva.