ಸತ್ಯಸದಾಚಾರವುಳ್ಳ ಶಿವಶರಣರವರಹುದೆಂದುದೆ
ಶುಭಮುಹೂರ್ತಂ [ಶುಭಘಳಿಗೆ] ಸಕಲ ಬಲ, ಸಕಲ ಜಯ.
ಅವರಲ್ಲವೆಂಬುದೇ ವಿಘ್ನ ವಿಷಗಳಿಗೆ ನಿರ್ಬಲ ಅಪಜಯ.
ಅದೆಂತೆಂದಡೆ:
ಅವರು ಮಾಡುವ ಕಾರ್ಯವೆಲ್ಲಾ
ಕೂಡಲಚೆನ್ನಸಂಗಮಾಧೀನವಾಗಿ.
ನೀನೆ ಮೃತ್ಯುಂಜಯನು, ವಿಶ್ವಾಧಿಪತಿಯಾದ ಕಾರಣ
ಜಯವಪ್ಪುದಯ್ಯಾ.
TransliterationSatyasadācāravuḷḷa śivaśaraṇaravarahudendude
śubhamuhūrtaṁ [śubhaghaḷige] sakala bala, sakala jaya.
Avarallavembudē vighna viṣagaḷige nirbala apajaya.
Adentendaḍe:
Avaru māḍuva kāryavellā
kūḍalacennasaṅgamādhīnavāgi.
Nīne mr̥tyun̄jayanu, viśvādhipatiyāda kāraṇa
jayavappudayyā.
ವಚನಕಾರ ಮಾಹಿತಿ
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.