ಸತ್ಯಾಚಾರಯುಕ್ತವಾದ ಭಕ್ತಜಂಗಮವನರಸಿಕೊಂಡು ಹೋಗಿ
ಭಕ್ತದೇಹಿಕದೇವನೆಂಬ ಶ್ರುತಿಯನರಿದು ಪ್ರಸಾದಕ್ಕೆ
ಸೂತಕವ ಮಾಡುವ ಪಾತಕರ ವಿಧಿಯಿನ್ನೆಂತೊ?
'ಶರೀರಮರ್ಥ ಪ್ರಾಣಂಚ ಸದ್ಗುರುಭ್ಯೋ ನಿವೇದಯೇತ್' ಎಂದುದಾಗಿ
ಆತನ ತನುಮನಧನಂಗಳೆಲ್ಲಾ ಗುರುವಿನ ಸೊಮ್ಮು,
ಆತನ ಸರ್ವಾಂಗವೆಲ್ಲವೂ ಪ್ರಸಾದಕ್ಷೇತ್ರ,
ಆ ಪ್ರಸಾದಕ್ಷೇತ್ರದೊಳಗಿದ್ದವರೆಲ್ಲರೂ ಪ್ರಸಾದಮಯ
ಆ ಪ್ರಸಾದಮಯದೊಳಗಿದ್ದವರೆಲ್ಲರೂ
ಪ್ರಸಾದದ ಬೆಳೆ, ಪ್ರಸಾದದಾಗು,
ಆತ ಮುಟ್ಟಿದ ಪದಾರ್ಥವೆಲ್ಲವೆಲ್ಲವೂ ಪ್ರಸಾದವಪ್ಪುದು
ಆತ ಮಾಡಿದುದೆಲ್ಲವು ಪ್ರಸಾದದ ಕಾಯಕ,
ಪ್ರಸಾದದ ನಡೆ, ಪ್ರಸಾದದ ನುಡಿ.
ಇಂತಪ್ಪ ಪ್ರಸಾದವಿದ್ದಲ್ಲಿಗೆ ಹೋಗಿ
'ಅದು ಬೇಕು ಇದು ಬೇಕು' ಎಂದು
ಓಗರಪದಾರ್ಥದ ಸವಿಯನರಸುವ
ಪಾತಕದ್ರೋಹಿಗಳ ಮೆಚ್ಚ
ನಮ್ಮ ಕೂಡಲಸಂಗಮದೇವ.
Transliteration Satyācārayuktavāda bhaktajaṅgamavanarasikoṇḍu hōgi
bhaktadēhikadēvanemba śrutiyanaridu prasādakke
sūtakava māḍuva pātakara vidhiyinnento?
'Śarīramartha prāṇan̄ca sadgurubhyō nivēdayēt' endudāgi
ātana tanumanadhanaṅgaḷellā guruvina som'mu,
ātana sarvāṅgavellavū prasādakṣētra,
ā prasādakṣētradoḷagiddavarellarū prasādamaya
ā prasādamayadoḷagiddavarellarū
prasādada beḷe, prasādadāgu,
āta muṭṭida padārthavellavellavū prasādavappudu
āta māḍidudellavu prasādada kāyaka,
prasādada naḍe, prasādada nuḍi.
Intappa prasādaviddallige hōgi
'Adu bēku idu bēku' endu
ōgarapadārthada saviyanarasuva
pātakadrōhigaḷa mecca
nam'ma kūḍalasaṅgamadēva.