•  
  •  
  •  
  •  
Index   ವಚನ - 1716    Search  
 
ಸುಟ್ಟು ಶುದ್ಧವಾದ ಬಳಿಕ ಮತ್ತೆ ಸುಡಲಿಕೆಲ್ಲಿಯದೊ? ಅಟ್ಟು ಪಾಕವಾದ ಬಳಿಕ ಮತ್ತೆ ಅಡಲೆಲ್ಲಿಯದೊ? ಇನ್ನು ಶುದ್ಧ ಮಾಡಿಹೆನೆಂಬ ವಿಧಿಯ ನೋಡಾ. ಶ್ರುತಿ: "ದಗ್ಧಸ್ಯ ದಹನಂ ನಾಸ್ತಿ ಪಕ್ವಸ್ಯ ಪಚನಂ ಯಥಾ| ಜ್ಞಾನಾಗ್ನಿ ದಗ್ಧದೇಹಸ್ಯ ನಚ ಶ್ರಾದ್ಧಂ ನ ಚ ಕ್ರಿಯಾ"|| ಇದುಕಾರಣ, ಕೂಡಲಚೆನ್ನಸಂಗಯ್ಯಾ ನಂಬಿಯೂ ನಂಬದಿದ್ದಡೆ ನ ಭವಿಷ್ಯತಿ.
Transliteration Suṭṭu śud'dhavāda baḷika matte suḍalikelliyado? Aṭṭu pākavāda baḷika matte aḍalelliyado? Innu śud'dha māḍ'̔ihenemba vidhiya nōḍā. Śruti: Dagdhasya dahanaṁ nāsti pakvasya pacanaṁ yathā| jñānāgni dagdhadēhasya naca śrād'dhaṁ na ca kriyā|| idukāraṇa, kūḍalacennasaṅgayyā nambiyū nambadiddaḍe na bhaviṣyati.