ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ.
ಒಬ್ಬರಿಗಲ್ಲದೆ ಇಬ್ಬರಿಗಿಂಬಿಲ್ಲ.
ಗಂಡಹೆಂಡೆರಿಬ್ಬರಿಗೆ ಇಹ ತೆರನಾವುದು ?
ತೆರಪಿಲ್ಲದುದ ಕಂಡು,
ಗಂಡನ ಮಂಡೆಯ ಮೇಲೆ ಹೆಂಡತಿ ಅಡಗಿರಲಾಗಿ,
ಬಂದಬಂದವರೆಲ್ಲರೂ ಅವಳ ಕಂಡು ಮನ ಸೋತು,
ಗಂಡನ ಕೊಂದು, ಅವಳ ಕೊಂಡು ಹೋಹಾಗ,
ಹುದುಗು ಹಿಂಗದೆ, ಇವರೆಲ್ಲರೂ ಕೊಂದಾಡಿ ಸತ್ತರು.
ಇದರ ಸಂಗವಾರಿಗೂ ಚೋದ್ಯ,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
Transliteration Phaṇiya heḍeya mēle, ondu maṇimāḍada maṇṭapa.
Obbarigallade ibbarigimbilla.
Gaṇḍaheṇḍeribbarige iha teranāvudu?
Terapilladuda kaṇḍu,
gaṇḍana maṇḍeya mēle heṇḍati aḍagiralāgi,
bandabandavarellarū avaḷa kaṇḍu mana sōtu,
gaṇḍana kondu, avaḷa koṇḍu hōhāga,
hudugu hiṅgade, ivarellarū kondāḍi sattaru.
Idara saṅgavārigū cōdya,
enna gūḍina gum'maṭanoḍeya agamyēśvaraliṅga.