•  
  •  
  •  
  •  
Index   ವಚನ - 84    Search  
 
ಕಾಡುಗುರಿ ತೆನೆಯಾಗಿ ಬಂದು, ಊರೊಳಗೆ ಮೂರು ಮರಿಯನೀಯಿತ್ತು. ಅವರ ವರ್ಣ ಒಂದೆಡ, ಒಂದು ಕಾಡ, ಒಂದು ಎಲ್ಲರ ಕೂಡಿದ ಬಣ್ಣ ಹೆಂಗುರಿ ಸತ್ತಿತ್ತು, ಮರಿಗೆ ಒಡೆಯರಿಲ್ಲ. ಆ ಮರಿಯ ಕಾವಡೆ, ಕಾಲಿಲ್ಲದೆ ಕೈಯಿಲ್ಲದೆ ಕಣ್ಣಿಲ್ಲದೆ ಕಾಯಬೇಕು. ಆ ಮರಿ ಅರಿದು ನಮಗೆ ಇನ್ನಾರು ಇಲ್ಲಾ ಎಂದು ಎಡಕಾಡನೊಳಗಡಗಿ, ಕಾಡ ನಾನಾ ವರ್ಣದೊಳಗಡಗಿ, ನಾಡು ನಾದದೊಳಗಡಗಿ, ನಾನಾ ವರ್ಣ ನಾಡಿನೊಳಗಡಗಿ, ನಾದ ಸುನಾದದಲ್ಲಿ ಅಡಗಿ, ಸುನಾದ ಸುರಾಳವಾಗಿ ಇದ್ದಲ್ಲಿ, ಗುಡಿಯ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ನೀ ನಿರಾಳವಾಗಿ ಇದ್ದೆ.
Transliteration Kāḍuguri teneyāgi bandu, ūroḷage mūru mariyanīyittu. Avara varṇa ondeḍa, ondu kāḍa, ondu ellara kūḍida baṇṇa heṅguri sattittu, marige oḍeyarilla. Ā mariya kāvaḍe, kālillade kaiyillade kaṇṇillade kāyabēku. Ā mari aridu namage innāru illā endu eḍakāḍanoḷagaḍagi, kāḍa nānā varṇadoḷagaḍagi, nāḍu nādadoḷagaḍagi, nānā varṇa nāḍinoḷagaḍagi, nāda sunādadalli aḍagi, sunāda surāḷavāgi iddalli, guḍiya guheya gum'maṭanoḍeya agamyēśvaraliṅga, nī nirāḷavāgi idde.