ನಿನ್ನ ಸದ್ರೂಪವೆ ಗುರು, ನಿನ್ನ ಮೂರ್ತಿಯೆ ಲಿಂಗ,
ನಿನ್ನಚಿದ್ರೂಪವೆ ಗುರು, ನಿನ್ನಾನಂದವೆ ಜಂಗಮ,
ನಿನ್ನ ಪರಮಾನಂದವೆ ಪಾದೋದಕ, ನಿನ್ನ ಪರಮ ಪ್ರಕಾಶವೆ ವಿಭೂತಿ,
ನಿನ್ನ ಮೊಗವೆ ರುದ್ರಾಕ್ಷಿ, ನಿನ್ನ ನಾಮವೆ ಷಡಕ್ಷರಿಮಂತ್ರ,
ಇಂತನಾದಿ ಪರಶಿವನಿಂದಾದಷ್ಟಾವರಣ
ವೀರಶೈವಾಚಾರಸಂಪದವಯ್ಯ ಶಾಂತವೀರೇಶ್ವರಾ
Transliteration Ninna sadrūpave guru, ninna mūrtiye liṅga,
ninnacidrūpave guru, ninnānandave jaṅgama,
ninna paramānandave pādōdaka, ninna parama prakāśave vibhūti,
ninna mogave rudrākṣi, ninna nāmave ṣaḍakṣarimantra,
intanādi paraśivanindādaṣṭāvaraṇa
vīraśaivācārasampadavayya śāntavīrēśvarā