•  
  •  
  •  
  •  
Index   ವಚನ - 9    Search  
 
ಅವುದಾನೊಂದು ಕಾರಣದಿಂದ ಮೊದಲು ಪ್ರಕೃತಿ ಪುರುಷಾತ್ಮವಹ ವಿಶ್ವವು ಎಲ್ಲಿ ಇರುತ್ತಿಹುದು ಮತ್ತೆ ಕಡೆಯಲ್ಲಿ ಎಲ್ಲಿ ಅಡಗುತ್ತಿಹದು ಅದು ಕಾರಣದಿಂದ ಅಲ್ಲಿಯದೆ ‘ಸ್ಥಲ’ವೆಂಬ ನಾಮವರ್ತಿಸೂದು. ಅದೆಂತೆಂದೊಡೆ: ಯತ್ರಾದೌ ಸ್ಥೀಯತೆ ವಿಶ್ವ ಪ್ರಾಕೃತಂ ಪೌರಷಂ ಯತಃ| ಲೀಯತೇ ಪುನರಂತೆ ಚ ಸ್ಥಲಂ ತತ್ಪ್ರೋಚ್ಚತೆ ತತಃ|| ಎಂದುದಾಗಿ ಶಾಂತವೀರೇಶ್ವರಾ
Transliteration Avudānondu kāraṇadinda modalu prakr̥ti puruṣātmavaha viśvavu elli iruttihudu matte kaḍeyalli elli aḍaguttihadu adu kāraṇadinda alliyade ‘sthala’vemba nāmavartisūdu. Adentendoḍe: Yatrādau sthīyate viśva prākr̥taṁ pauraṣaṁ yataḥ| līyatē punarante ca sthalaṁ tatprōccate tataḥ|| endudāgi śāntavīrēśvarā