•  
  •  
  •  
  •  
Index   ವಚನ - 33    Search  
 
ಜ್ವಲಿಸುತ್ತಿರ್ದ ಕಾಲಾಗ್ನಿಯ ಕಾಂತಿಯುಳ್ಳಂಥಾ ಮಿಂಚುಗಳ ಕೋಟಿ ಸಂಖ್ಯೆಯ ಕೂಡಿದ್ದ ಪ್ರಕಾಶವುಳ್ಳ ಸೂಕ್ಷ್ಮವಾದ ಜ್ಞಾನಸ್ವರೂಪವಹ ಉತ್ಕೃಷ್ಟವಹ ಕಲಾಯುಕ್ತವಾದ ಆ ಅನಾದಿ ಜಂಗಮದ ಶಿಖೆಯಲ್ಲಿ ನಿಶ್ಚಲವಾದ ಶೂನ್ಯಲಿಂಗವು ಹುಟ್ಟಿತ್ತಯ್ಯಾ ಶಾಂತವೀರೇಶ್ವರಾ
Transliteration Jvalisuttirda kālāgniya kāntiyuḷḷanthā min̄cugaḷa kōṭi saṅkhyeya kūḍidda prakāśavuḷḷa sūkṣmavāda jñānasvarūpavaha utkr̥ṣṭavaha kalāyuktavāda ā anādi jaṅgamada śikheyalli niścalavāda śūn'yaliṅgavu huṭṭittayyā śāntavīrēśvarā