•  
  •  
  •  
  •  
Index   ವಚನ - 55    Search  
 
ವಾಮವೆಂಬ ಹೆಸರುಳ್ಳಾಗಮವು ಶಕ್ತಿಯೆ ಮುಖ್ಯವಾಗುಳ್ಳಂಥಾದ್ದು ದಕ್ಷಿಣಾಗಮವು ಭೈರವನ ಸ್ವರೂಪ ಉಳ್ಳಂಥಾದ್ದು ಸಪ್ತ ಮಾತೃಕೆಯರೆ ಪ್ರಧಾನವಾಗಿ ಉಳ್ಳಂಥಾದ್ದು ಸಿದ್ಧಾಂತವೆಂಬ ಹೆಸರುಳ್ಳಾಗಮವು ವೇದಂಗಳಿಗೆ ಸಮ್ಮತವಾಗಿದ್ದಂಥಾದ್ದು ಅದಕ್ಕೆ ದೃಷ್ಟಂತವೆಂತೆನೆ: ಶ್ಲೋಕ: “ಶಕ್ತಿ ಪ್ರಧಾನಂ ವಾಮಾಖ್ಯಂ ದಕ್ಷಿಣ ಭೈರವಾತ್ಮಕಂ, ಸಪ್ತಮಾತೃ ಪರಂ ಮಿಶ್ರಂ ಸಿದ್ಧಾಂತಂ ವೇದಸಮ್ಮತಂ” ಎಂದುದಾಗಿ ಶಾಂತವೀರೇಶ್ವರಾ ಸೂತ್ರ: ಆ ಸಿದ್ಧಾಂತವು ಆ ಪ್ರಕಾರದಲ್ಲಿ ವೇದ ಸಮ್ಮತವೆಂದು ಕಾರಣವನುನ ಹೇಳುತಿರ್ದಪಂ.
Transliteration Vāmavemba hesaruḷḷāgamavu śaktiye mukhyavāguḷḷanthāddu dakṣiṇāgamavu bhairavana svarūpa uḷḷanthāddu sapta mātr̥keyare pradhānavāgi uḷḷanthāddu sid'dhāntavemba hesaruḷḷāgamavu vēdaṅgaḷige sam'matavāgiddanthāddu adakke dr̥ṣṭantaventene: Ślōka: “Śakti pradhānaṁ vāmākhyaṁ dakṣiṇa bhairavātmakaṁ, saptamātr̥ paraṁ miśraṁ sid'dhāntaṁ vēdasam'mataṁ” endudāgi śāntavīrēśvarā sūtra: Ā sid'dhāntavu ā prakāradalli vēda sam'matavendu kāraṇavanuna hēḷutirdapaṁ.