•  
  •  
  •  
  •  
Index   ವಚನ - 86    Search  
 
ಶರೀರತ್ಮವಿವೇಕದಿಂದ ಪಿಂಡಜ್ಞಾನವುಳ್ಳಾತನೆಂದು ಹೇಳುವರು. ಚಾರ್ವಾಕರು ‘ದೇಹವು ಆತ್ಮ’ವೆಂದರು ಇತರರು ಇಂದ್ರಿಯಂಗಳಿಂದ ಅತ್ಮ ಸ್ವರೂಪವನು ಹೇಳುವರು. ‘ಬುದ್ಧಿ ತತ್ವ’ನೆಯ್ದಿರ್ದ ಬೌದ್ಧರು ‘ಬುದ್ಧಿಯೆ ಆತ್ಮ’ನೆಂದು ಹೇಳುವರು ದೇಹಕ್ಕೆ ಆತ್ಮತತ್ವವು ಆಗದು, ಬುದ್ಧಿತತ್ವಕ್ಕೆ ಆತ್ಮತತ್ವವು ಇಲ್ಲ. ಸಾಕ್ಷಿ: “ಶರೀರಮೇವ ಚಾರ್ವಾಕೈ| ರಾತ್ಮೇತಿ ಪರಿಕೀರ್ತ್ಯತೆ| ಇಂದ್ರಿಯಾಗಣಾಂ ತಥಾತ್ವತ್ವ| ಮಪರೈಃ ಪರಿಭಾಷ್ಯತೆ|” “ಬುದ್ಧತತ್ತ್ವ ಗತ್ಯೆ ಬೌದ್ಛೈ| ಬುದ್ಧಿರಾತ್ಮೀತಿನೀಯತೇನೇಂದ್ರಿಯಣಾಂ ದೇಹಸ್ಯ| ನ ಬುದ್ಧಿರಾತ್ಮ ತಾ ಭವೇತ್” ಎಂದುದಾಗಿ ಶಾಂತವೀರೇಶ್ವರಾ
Transliteration Śarīratmavivēkadinda piṇḍajñānavuḷḷātanendu hēḷuvaru. Cārvākaru ‘dēhavu ātma’vendaru itararu indriyaṅgaḷinda atma svarūpavanu hēḷuvaru. ‘Bud'dhi tatva’neydirda baud'dharu ‘bud'dhiye ātma’nendu hēḷuvaru dēhakke ātmatatvavu āgadu, bud'dhitatvakke ātmatatvavu illa. Sākṣi: “Śarīramēva cārvākai| rātmēti parikīrtyate| indriyāgaṇāṁ tathātvatva| maparaiḥ paribhāṣyate|” “bud'dhatattva gatye baudchai| bud'dhirātmītinīyatēnēndriyaṇāṁ dēhasya| na bud'dhirātma tā bhavēt” endudāgi śāntavīrēśvarā