ಜೀವನು ಹುಲ್ಲು ಮೇಲಣ ಜಿಗಳೆಯೋಪಾದಿಯಲ್ಲಿ
ದೇಹದ ದೆಸೆಯಿಂದ ಯಾತನಾ ಶರೀರವನು ಕ್ರಮದಿಂದ ಪ್ರವೇಶಿಸುವನು,
ಸೂಕ್ಷಾಂಶದಿಂದ ಮೇಲಣ ಯಾತನಾ ಶರೀರವಾದ
ಪೂರ್ವ ಶರೀರವನು ಬಿಡುತ್ತಮಿಹನಯ್ಯ
ಶಾಂತವೀರೇಶ್ವರಾ
Transliteration Jīvanu hullu mēlaṇa jigaḷeyōpādiyalli
dēhada deseyinda yātanā śarīravanu kramadinda pravēśisuvanu,
sūkṣānśadinda mēlaṇa yātanā śarīravāda
pūrva śarīravanu biḍuttamihanayya
śāntavīrēśvarā