ಕೂಪಜಲವ ಬಳಸುವನ್ನಕ್ಕ,
ಲವಣ ಬಳಕೆ ಸಾರೋಪಿತ ದ್ರವ್ಯವನ್ನರಿಯಬೇಕು.
ಸರ್ವಸಂಗ್ರಹಗಳಲ್ಲಿ ಸೌಕರ್ಯವ ತಿಳಿಯಬೇಕು.
ಪರ್ಣ ಫಲಂಗಳಲ್ಲಿ ಪುನರಪಿ ಪ್ರಕ್ಷಾಲನವ ಮಾಡಬೇಕು.
ಕೂಪೋದಕವ ತ್ರಿಪಾವಡೆಯಲ್ಲಿ ಸೋದಿಸಬೇಕು.
ಇಂತಿವು ಸಂತೋಷ; ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗಕ್ಕೆ ಅರ್ಪಿತ.
Transliteration Kūpajalava baḷasuvannakka,
lavaṇa baḷake sārōpita dravyavannariyabēku.
Sarvasaṅgrahagaḷalli saukaryava tiḷiyabēku.
Parṇa phalaṅgaḷalli punarapi prakṣālanava māḍabēku.
Kūpōdakava tripāvaḍeyalli sōdisabēku.
Intivu santōṣa; ācārave prāṇavāda
rāmēśvaraliṅgakke arpita.