•  
  •  
  •  
  •  
Index   ವಚನ - 112    Search  
 
ಆಚಾರ್ಯನು ಶುದ್ಧಾತ್ಮನಾಗಿ ಸಮೀಪದಲ್ಲಿ ಕುಳ್ಳಿರ್ದ ಶಿಷ್ಯನನು ಪಂಚಾಕ್ಷರಾತ್ಮಕವಾದ ಪಂಚ ಕಳಶೋದಕಂಗಳಿಂದಭಿಷೇಕವನು ಮಾಡಿ ಸಂಸಾರ ಭಯವನು ದಾಂಟಿಸುವನು ‘ನಮಃ ಶಿವಾಯ ಚ ಶಿವೇತರಾಯ ಚ’ ಎಂದು ‘ಶ್ರೀರುದ್ರ;’ದಲ್ಲಿ ಪ್ರಸಿದ್ಧವಾದ ಶಿವಸಂಬಂಧವಾದ ಪಂಚಾಕ್ಷರಿ ಮಂತ್ರವನು ಆ ಶಿಷ್ಯನು ಬಲ ಕಿವಿಯಲ್ಲಿ ರಹಸ್ಯವಾಗಿ ಉಪಾಂಶುವಾಗಿ ಉಪದೇಶಿಸುವುದಯ್ಯ ಶಾಂತವೀರೇಶ್ವರಾ
Transliteration Ācāryanu śud'dhātmanāgi samīpadalli kuḷḷirda śiṣyananu pan̄cākṣarātmakavāda pan̄ca kaḷaśōdakaṅgaḷindabhiṣēkavanu māḍi sansāra bhayavanu dāṇṭisuvanu ‘namaḥ śivāya ca śivētarāya ca’ endu ‘śrīrudra;’dalli prasid'dhavāda śivasambandhavāda pan̄cākṣari mantravanu ā śiṣyanu bala kiviyalli rahasyavāgi upānśuvāgi upadēśisuvudayya śāntavīrēśvarā