ಇನ್ನು ಲಿಂಗ ಪ್ರಮಾಣಮೆಂತೆಂದೊಡೆ:
ಲಿಂಗಾಧಿಕ್ಯಮಾಗೆ ಮೃತ್ಯು, ಶಕ್ತ್ಯಾಧಿಕಮಾಗೆ ದರಿದ್ರತೆ,
ಲಿಂಗ ಶಕ್ತಿ ಸಮಾನದಿಂ ಭೋಗ ಮೊಕ್ಷಂಗಳಪ್ಪುದರಿಂದಾಲಿಂಗದ ವೃತ್ತಮಂ
ಬಳಸಿ ಸೂತ್ರದಿಂದಳದಾ ಸೂತ್ರಮಂ ಗೋಮುಖದ ತುದಿಗೆ ಲಿಂಗದ
ಮಸ್ತಕಕ್ಕೆ ಹವಣಿಸಿ ಮೇಲಾ ಸೂತ್ರರ್ಧದಿಂ ಗೋಮುಖವಳದು
ಸಮಾನವನರಿದು ಇಂತು ಪಂಚಸೂತ್ರಮುಳ್ಳ ಲಿಂಗಮಂ ಗುರುವಾದಾತ
ಲಕ್ಷಣಮರಿದು ಧರಿಸಬೇಕಲ್ಲದೆ ಲಕ್ಷಣ ಹೀನ ಲಿಂಗವ ಧರಿಸಲಾಗದಯ್ಯ
ಶಾಂತವೀರೇಶ್ವರಾ
Transliteration Innu liṅga pramāṇamentendoḍe:
Liṅgādhikyamāge mr̥tyu, śaktyādhikamāge daridrate,
liṅga śakti samānadiṁ bhōga mokṣaṅgaḷappudarindāliṅgada vr̥ttamaṁ
baḷasi sūtradindaḷadā sūtramaṁ gōmukhada tudige liṅgada
mastakakke havaṇisi mēlā sūtrardhadiṁ gōmukhavaḷadu
samānavanaridu intu pan̄casūtramuḷḷa liṅgamaṁ guruvādāta
lakṣaṇamaridu dharisabēkallade lakṣaṇa hīna liṅgava dharisalāgadayya
śāntavīrēśvarā