ಒಂದಕ್ಷರವಾಗಿರ್ದ ‘ಓಂ’ಕಾರದಿಂದ
ತೊಲಗಿದ ಜಗತ್ಪ್ರಪಂಚವುಳ್ಳ ಶಿವಾಗಮ
ಪ್ರಸಿದ್ಧವಾದ ಶಿವನೆಂಬ ಹೆಸರುಳ್ಳ
ಅದ್ವಿತೀಯ ಪರಬ್ರಹ್ಮ ‘ಏಕಮೇವಾದ್ವಿತೀಯಂ ಬ್ರಹ್ಮ’ವೆಂದು
ಶ್ರುತಿ ಶಿರಸ್ಸಿದ್ಧವಾದ ಪರಬ್ರಹ್ಮ ವಾಚ್ಯವಾದ
ಪರಮ ತೃಪ್ತಿರೂಪವಾದ ಮಹಾಲಿಂಗವು
ಪ್ರಕಾಶಿಸುತ್ತಿರ್ಪದಯ್ಯ ಶಾಂತವೀರೇಶ್ವರಾ
Transliteration Ondakṣaravāgirda ‘ōṁ’kāradinda
tolagida jagatprapan̄cavuḷḷa śivāgama
prasid'dhavāda śivanemba hesaruḷḷa
advitīya parabrahma ‘ēkamēvādvitīyaṁ brahma’vendu
śruti śiras'sid'dhavāda parabrahma vācyavāda
parama tr̥ptirūpavāda mahāliṅgavu
prakāśisuttirpadayya śāntavīrēśvarā