•  
  •  
  •  
  •  
Index   ವಚನ - 273    Search  
 
ಬಳಿಕ ಶಕುನಿ ಮೊದಲಾದ ಭದ್ರೆ ಕಡೆಯಾದ ಹನ್ನೊಂದು ಕರಣಂಗಳೊಳಗೆ ಶಕುನಿ ಚತುಷ್ಕ ನಾಗ ವಸ್ತುಘ್ನ ವಣಿಜೆ ಭದ್ರೆ ಎಂಬ ಆರು ಕರಣಂಗಳೆ ಅಶುಭಂಗಳು. ಉಳಿದಯ್ದು ಕರಣಂಗಳೆ ಶುಭಂಗಳು. ಕರಣಂಗಳ ಪರೀಕ್ಷಿಸಿದ ಬಳಿಕ ಶುಭ ಇಥಿಯಂ ಶ್ರೀಯು ಬಳಿಕ ಶುಭ ತಿಥಿಯಂ ಶ್ರೀಯು ಶುಭ ವಾರದಿಂದಾಯ್ದು ಶುಭ ನಕ್ಷತ್ರದಿಂ ಪಾಪಕ್ಷಯ ಶುಭಯೋಗದಿಂ ರೋಗ ನಿವೃತ್ತಿ ಶುಭಕರಣದಿಂ ಕಾರ್ಯ ಸಿದ್ಧಿಗಳಪ್ಪವಾಗಿ ಮಂತ್ರ ಜಪ ಪ್ರಾರಂಭದಲ್ಲಿ ಎಲ್ಲಮಂ ಸರ್ವಥಾ ವಿಚಾರಿಸ ಬೇಕಂಬುದನಂಗೀಕರಿಸಿ ಜಪ ಮಾಡುವುದಯ್ಯ ಶಾಂತವೀರೇಶ್ವರಾ
Transliteration Baḷika śakuni modalāda bhadre kaḍeyāda hannondu karaṇaṅgaḷoḷage śakuni catuṣka nāga vastughna vaṇije bhadre emba āru karaṇaṅgaḷe aśubhaṅgaḷu. Uḷidaydu karaṇaṅgaḷe śubhaṅgaḷu. Karaṇaṅgaḷa parīkṣisida baḷika śubha ithiyaṁ śrīyu baḷika śubha tithiyaṁ śrīyu śubha vāradindāydu śubha nakṣatradiṁ pāpakṣaya śubhayōgadiṁ rōga nivr̥tti śubhakaraṇadiṁ kārya sid'dhigaḷappavāgi mantra japa prārambhadalli ellamaṁ sarvathā vicārisa bēkambudanaṅgīkarisi japa māḍuvudayya śāntavīrēśvarā