ತತ್ತ್ವ ಮನ ಪ್ರಾಣಂಗಳ
ಗುರುಚರಣಕ್ಕೆ ಸಮರ್ಪಿಸುವುದೆ ‘ಗುರುಭಕ್ತಿ’ಯಯ್ಯ
ಜಡೆ ಮುಡಿ ಲೋಚು ಬೋಳು ದಿಗಂಬರ
ಮೊದಲಾದ ಶಿವಲಾಂಛನಧಾರಿಯಾದ ಜಂಗಮಕ್ಕೆ
ಅನ್ನಾಚ್ಛಾದನಾಲಂಕಾರಾದಿಗಳಿಂದ ತೃಪ್ತಿಬಡಿಸಿ
ಅವರ ಪ್ರಸಾದವ ಸೇವಿಸಲಾಗಿ ‘ಜಂಗಮಭಕ್ತಿ’ಯಯ್ಯ
ಶಿವಲಿಂಗ ಭೋಜ್ಯ ಪಾನೀಯ
ಭಕ್ಷ ಚೋಹ್ಯ ಲೇಹ್ಯ ಪದಾರ್ಥವನು
ಸಮರ್ಪಿಸಿ ಆ ಪ್ರಸಾದವನು
ಭೋಗಿಸುವುದೆ ‘ಪ್ರಸಾದ ಭಕ್ತಿ’ ಯಯ್ಯ ಶಾಂತವೀರೇಶ್ವರಾ
Transliteration Tattva mana prāṇaṅgaḷa
gurucaraṇakke samarpisuvude ‘gurubhakti’yayya
jaḍe muḍi lōcu bōḷu digambara
modalāda śivalān̄chanadhāriyāda jaṅgamakke
annācchādanālaṅkārādigaḷinda tr̥ptibaḍisi
avara prasādava sēvisalāgi ‘jaṅgamabhakti’yayya
śivaliṅga bhōjya pānīya
bhakṣa cōhya lēhya padārthavanu
samarpisi ā prasādavanu
bhōgisuvude ‘prasāda bhakti’ yayya śāntavīrēśvarā