ಗುರು ಲಿಂಗ ಜಂಗಮವೆ ಕರ್ತೃವಾಗಿ
ತಾನೆ ಭೃತ್ಯನಾಗಿ ಒಡೆಯನೊಡವೆಯನೊಪ್ಪಿಸುವಾಳಿನಂತೆ
ತನು ಮನ ಧನಂಗಳನರ್ಪಿಸಿ ಫಲ ಪದಂಗಳ
ಬಯಸದೆ ಇರುವಾತನೆ ನಿರುಪಾಧಿಕ ದಾಸೋಹಿಯಯ್ಯ
ಶಾಂತವೀರೇಶ್ವರಾ
Transliteration Guru liṅga jaṅgamave kartr̥vāgi
tāne bhr̥tyanāgi oḍeyanoḍaveyanoppisuvāḷinante
tanu mana dhanaṅgaḷanarpisi phala padaṅgaḷa
bayasade iruvātane nirupādhika dāsōhiyayya
śāntavīrēśvarā