ಭ್ರಾಂತಿ ಲಕ್ಷಣವುಳ್ಳ ಶರೀರ ಮುಂತಾದ
ಜಗದ್ರೂಪವು ಉಚ್ಛಿಷ್ಟವೆನಿಸುವದು.
ಆ ಶರೀರಾಭಿಮಾನವುಳ್ಳ ಸಂಸಾರವೆ ಕುರುಹುಳ್ಳ
ಜೀವನ ಅನ್ನವೆನಿಸುವನು
ಸಚ್ಚಿದಾನಂದಂಗಳೆ ಕುರುಹಾಗುಳ್ಳ
ಪ್ರತ್ಯಕ್ಷವಾದ ಶಿವನೆ ಪ್ರಸಾದವೆನಿಸಿಕೊಂಬನು ಅಯ್ಯ
ಶಾಂತವೀರೇಶ್ವರಾ
Transliteration Bhrānti lakṣaṇavuḷḷa śarīra muntāda
jagadrūpavu ucchiṣṭavenisuvadu.
Ā śarīrābhimānavuḷḷa sansārave kuruhuḷḷa
jīvana annavenisuvanu
saccidānandaṅgaḷe kuruhāguḷḷa
pratyakṣavāda śivane prasādavenisikombanu ayya
śāntavīrēśvarā