•  
  •  
  •  
  •  
Index   ವಚನ - 421    Search  
 
ಶ್ರೀ ಗುರುವೆ ಪುರಷನು ಶಿಷ್ಯನೆ ಸತಿಯ ಆ ಗುರು ಶಿಷ್ಯರ ಹಸ್ತಮಸ್ತಕ ಸಂಯೋಗದಿಂದ ಶಿವಲಿಂಗವೆಂಬ ಶಿಶು ಹುಟ್ಟಿತ್ತು. ಅದು ಕಾರಣ, ಆ ಗುರುಶಿಷ್ಯರೆಂಬ ತಂದೆತಾಯಿಗಳು ತಮ್ಮ ಪ್ರಸಾದವ ಲಿಂಗಕ್ಕೆ ಕೊಟ್ಟು ಆ ಲಿಂಗ ಪ್ರಸಾದವ ತಾವು ಕೊಂಬುದೆ ಆಚಾರ. ಶರಣನೆ ಶಿವ, ಶಿವನೆ ಶರಣನಯ್ಯ. ಶರಣ ಪ್ರಸಾದ ಶಿವಲಿಂಗಕ್ಕೆ ಪ್ರಾಣ, ಶಿವಲಿಂಗ ಪ್ರಸಾದ ಶರಣಂಗೆ ಪ್ರಾಣವಯ್ಯ ಶಾಂತವೀರೇಶ್ವರಾ
Transliteration Śrī guruve puraṣanu śiṣyane satiya ā guru śiṣyara hastamastaka sanyōgadinda śivaliṅgavemba śiśu huṭṭittu. Adu kāraṇa, ā guruśiṣyaremba tandetāyigaḷu tam'ma prasādava liṅgakke koṭṭu ā liṅga prasādava tāvu kombude ācāra. Śaraṇane śiva, śivane śaraṇanayya. Śaraṇa prasāda śivaliṅgakke prāṇa, śivaliṅga prasāda śaraṇaṅge prāṇavayya śāntavīrēśvarā