ಕರ್ತೃವಾದ ಗುರು ಲಿಂಗ ಜಂಗಮದ ಪಂಕ್ತಿಯಲ್ಲಿ
ಅಡ್ಡಣಿಗೆಯ ಮೇಲೆ ಪರಿಯಾಣವನಿರಿಸಿಕೊಂಡು
ಸರಿ ಗದ್ದುಗೆಯಲ್ಲಿ ಭೋಜನವ ಮಾಡಲಾಗದಯ್ಯ ಭಕ್ತನು.
ಕಾಯದ ಕೈಮುಟ್ಟಿ, ಜ್ಞಾನಾರ್ಪಣ ಭಾವದ ಕೈಮುಟ್ಟಿ,
ಪರಿಣಾಮಾರ್ಪಣವನು
ಆ ಇಷ್ಟಲಿಂಗದ ವೃತ್ತ ಗೋಮುಖ ಗೋಳಕಂಗಳಲ್ಲಿಯೆ
ಆ ಲಿಂಗತ್ರಯಂಗಳ ತಿಳಿದು ಅರ್ಪಿಸಿ
ಆ ಲಿಂಗ ಪ್ರಸಾದವ ಕೊಂಡು ಸುಖಿಯಹುದಯ್ಯ
ಶಾಂತವೀರೇಶ್ವರಾ
Transliteration Kartr̥vāda guru liṅga jaṅgamada paṅktiyalli
aḍḍaṇigeya mēle pariyāṇavanirisikoṇḍu
sari gaddugeyalli bhōjanava māḍalāgadayya bhaktanu.
Kāyada kaimuṭṭi, jñānārpaṇa bhāvada kaimuṭṭi,
pariṇāmārpaṇavanu
ā iṣṭaliṅgada vr̥tta gōmukha gōḷakaṅgaḷalliye
ā liṅgatrayaṅgaḷa tiḷidu arpisi
ā liṅga prasādava koṇḍu sukhiyahudayya
śāntavīrēśvarā