•  
  •  
  •  
  •  
Index   ವಚನ - 502    Search  
 
ಸಃ ಎಂಬ ತಚ್ಛಬ್ದದಿಂದ ಪ್ರಸಿದ್ಧವಾದ ಪರಮೇಶ್ವರನು ಅಕಾರಾದಿ ಹಕಾರಾಂತವಾದ ವರ್ಣಾದಿ ಪಾಶದಿಂ ಕಟ್ಟಲಾದ ಜೀವಾತ್ಮನೆ ಹಂಸ[ಪದ]ವಾಚ್ಯವು ಸೋಹಂ ಕೃತಾತ್ಮ ಮಂತ್ರಂ ಸ್ವಪದ ಪರಪದ ಎಂಬುದು ಮೊದಲಾದ ಯೋಗ ಶಾಸ್ತ್ರೋಕ್ತಿಯಿಂದೆಯೂ ಗುರೂಕ್ತಿ ಸ್ವಾನುಭವಗಳಿಂದೆಯೂ ಶಿವಯೋಗ ಸಮಾಧಿಯನು ನಿಶ್ಷಯಿಸುವುದಯ್ಯ ಶಾಂತವೀರೇಶ್ವರಾ
Transliteration Saḥ emba tacchabdadinda prasid'dhavāda paramēśvaranu akārādi hakārāntavāda varṇādi pāśadiṁ kaṭṭalāda jīvātmane hansa[pada]vācyavu sōhaṁ kr̥tātma mantraṁ svapada parapada embudu modalāda yōga śāstrōktiyindeyū gurūkti svānubhavagaḷindeyū śivayōga samādhiyanu niśṣayisuvudayya śāntavīrēśvarā