•  
  •  
  •  
  •  
Index   ವಚನ - 507    Search  
 
ಶಿವಧರ್ಮವೆಂಬ ನಾಡಿಯೊಡನೆ ಕೂಡಿದ ಸುಜ್ಞಾನವೆಂಬ ದಂಟನುಳ್ಳ ಕೇಡಿಲ್ಲದಣಿಮಾದ್ಯಷ್ಟೈಶ್ವರ್ಯಂಗಳೆಂಬ ಅಷ್ಟದಳಂಗಳುಳ್ಳಂತ ಚಂದ್ರಂಗೆ ಸಮಾನವಾದ ವೈರಾಗ್ಯವೆಂಬ ಲೇಸಾದ ಬೀಜ ಕೋಶವನುಳ್ಳ ಶ್ರೀರುದ್ರ ಗಣಂಗಳೆಂಬಂಥ ಕಿಂಜಲಕ್ಕಗಳೊಡನೆ ಕೂಡಿದ ಈ ಹೃತ್ಕಮವನು ಚೆನ್ನಾಗಿ ತಿಳಿದು ಆ ಹೃತ್ವದ್ಮದ ಮಧ್ಯದಲ್ಲಿ ಜ್ವಲಿಸುತ್ತಿರ್ದ ಚಂದ್ರ ಸೂರ್ಯಾದಿ ಮಂಡಲಂಗಳಲ್ಲಿರುವ ಜ್ಞಾನ ಸ್ವರೂಪವಾದ ಪರಮೇಶ್ವರ ಧ್ಯಾನವಂ ಮಾಡುವದಯ್ಯ ಶಾಂತವೀರೇಶ್ವರಾ
Transliteration Śivadharmavemba nāḍiyoḍane kūḍida sujñānavemba daṇṭanuḷḷa kēḍilladaṇimādyaṣṭaiśvaryaṅgaḷemba aṣṭadaḷaṅgaḷuḷḷanta candraṅge samānavāda vairāgyavemba lēsāda bīja kōśavanuḷḷa śrīrudra gaṇaṅgaḷembantha kin̄jalakkagaḷoḍane kūḍida ī hr̥tkamavanu cennāgi tiḷidu ā hr̥tvadmada madhyadalli jvalisuttirda candra sūryādi maṇḍalaṅgaḷalliruva jñāna svarūpavāda paramēśvara dhyānavaṁ māḍuvadayya śāntavīrēśvarā