ಪರಿಪೂರ್ಣ ಜ್ಞಾನ ಸ್ವರೂಪವಾಗಿ
ಸಮಸ್ತವು ತನಗೆ ಸೃಜಿಸಬೇಕಾದ ವಸ್ತುವಾಗಿ
ಸರ್ವಕರ್ತೃವಾಗಿ ಪ್ರಕೃತಿ ತತ್ತ್ವಕಿಂದವು
ಮೇಲಾದ ಶಿವಸ್ವರೂಪವಾಗಿ ತಾವರೆಯ
ಕಾವಿಗೆ ನೂಲಿಗೆ ಸರಿಯಾದ
ಪರಂಜ್ಯೋತಿಯನು ಶಿವಯೋಗವ ಬಲ್ಲವರಲ್ಲಿ
ಶ್ರೇಷ್ಠನಾದಾತನು ಧ್ಯಾನವ ಮಾಡುವುದಯ್ಯ
ಶಾಂತವೀರೇಶ್ವರಾ
Transliteration Paripūrṇa jñāna svarūpavāgi
samastavu tanage sr̥jisabēkāda vastuvāgi
sarvakartr̥vāgi prakr̥ti tattvakindavu
mēlāda śivasvarūpavāgi tāvareya
kāvige nūlige sariyāda
paran̄jyōtiyanu śivayōgava ballavaralli
śrēṣṭhanādātanu dhyānava māḍuvudayya
śāntavīrēśvarā