•  
  •  
  •  
  •  
Index   ವಚನ - 514    Search  
 
ಮೊದಲದ್ವಯವು ಅನ್ಯೋನ್ಯವಾಗಿ ಕೂಡಿದುದಾಗಿ ಸ್ವಾಧಿಷ್ಠಾನಾದೊಡನೆ ಕೂಡಿದ ಆಧಾರವು ಅಧಮ ಸ್ಥಾನವು. ಶಕ್ತಿ ಸ್ಥಾನದೊಡನೆ ಕೂಡಿದ ಮಣಿಪೂರಕವು ಮಧ್ಯಮ ಸ್ಥಾನವು. ಹಾಂಗೆ ಮೇಲಣವೆರಡು ಅನ್ನೋನ್ಯವಾಗಿ ಬೆರೆದು ವಿಶುದ್ಧಿಯೊಡನೆ ಕೂಡಿದ ಅನಾಹತವು ಉತ್ತಮಸ್ಥಾನವು. ಶೂನ್ಯದೊಡನೆ ಕೂಡಿದ ಭ್ರೂಮಧ್ಯವು ಉತ್ತಮೋತ್ತಮ ಸ್ಥಾನವು. ಆಧಾರ ಮೊದಲಾದ ಆರು ಸ್ಥಾನವು ಶಕ್ತಿ ಬೀಜಂಗಳೊಡನೆ ಕೂಡಿದುದು ಅದರಿಂದ ಮೇಲಣ ಬ್ರಹ್ಮರಂಧ್ರವೆರಡು ಶಕ್ತಿ ಬೀಜಗಳಿಂದ ಬಿಡಲ್ಪಟ್ಟುದು. ಅನಂತರದಲ್ಲಿ ಮೇಲೆ ಅರಿಯಬಹುದಾದ ಕೈಲಾಸ ಸ್ಥಾನವೆಂಬ ಹೆಸರುಳ್ಳ ಆ ಪರಬ್ರಹ್ಮ ರೂಪವಾದ ಶಿವಂಗೆ ಸ್ಥಾನವಾಗಿ ಬ್ರಹ್ಮರಂಧ್ರವೆಂಬ ಹೆಸರುಳ್ಳ ಆ ಸ್ಥಾನವು ಅವಲಂಬನವಿಲ್ಲದುದೆಂದು ಹೇಳುವರಯ್ಯ ಶಾಂತವೀರೇಶ್ವರಾ
Transliteration Modaladvayavu an'yōn'yavāgi kūḍidudāgi svādhiṣṭhānādoḍane kūḍida ādhāravu adhama sthānavu. Śakti sthānadoḍane kūḍida maṇipūrakavu madhyama sthānavu. Hāṅge mēlaṇaveraḍu annōn'yavāgi beredu viśud'dhiyoḍane kūḍida anāhatavu uttamasthānavu. Śūn'yadoḍane kūḍida bhrūmadhyavu uttamōttama sthānavu. Ādhāra modalāda āru sthānavu śakti bījaṅgaḷoḍane kūḍidudu Adarinda mēlaṇa brahmarandhraveraḍu śakti bījagaḷinda biḍalpaṭṭudu. Anantaradalli mēle ariyabahudāda kailāsa sthānavemba hesaruḷḷa ā parabrahma rūpavāda śivaṅge sthānavāgi brahmarandhravemba hesaruḷḷa ā sthānavu avalambanavilladudendu hēḷuvarayya śāntavīrēśvarā