ಈ ಲಿಂಗವು ಪತಿಯು ನಾನೇ ಸತಿಯು
ಹೀಗೆಂಬ ಭಾವದಿಂದ ಆವಾಗಳೂ ಕೂಡಿ
ಪಂಚೇಂದ್ರಿಯ ಸಂಬಂಧವಿಲ್ಲದಾತನೆ ಶರಣನಯ್ಯ.
ಶಿವತತ್ತ್ವವೆ ಶರಣ, ಶರಣನೆ ಶಿವತತ್ತ್ವ.
ಈ ಉಭಯವು ಕೂಡಿ ಅದು ಕಾರಣ ಶರಣಸ್ಥಲವು
ಸಾಕಾರ ನಿರಾಕಾರವಾದುದುಯ್ಯ; ಮಹಾಜ್ಞಾನವಾದುದಯ್ಯ!
ಮೋಕ್ಷವನಿಚ್ಛೈಸುತ್ತಿರ್ದ ಶರಣಂಗೆ
ಛಂದಸ್ಸು ವ್ಯಾಕರಣಾಭಿಜ್ಞಾನಾಗಬೇಕೆಂಬ ಕಾಂಕ್ಷೆಯಿಲ್ಲ.
ರಮ್ಯ ವಸನಾದಿಗಳಲ್ಲಿ ಕಾಂಕ್ಷೆಯಿಲ್ಲ.
ಷಡ್ರಾಸಾನ್ನ ಮೃಷ್ಟಾನ್ನಂಗಳಲ್ಲಿಯು ಅಭಿಲಾಷೆ ಇಲ್ಲ.
ಲೋಕದ ಚಿಂತೆಯು ಇಲ್ಲ.
ಮಿಮಾಂಸೆ ವೈಶೇಷಿಕ ನ್ಯಾಯ ಸಾಂಖ್ಯ ಪಾತಂಜಲಿ
ಯೋಗವೆಂಬ ಆರು ಷಡ್ದರ್ಶನಗಳು
ವೇದ ಶಾಸ್ತ್ರ ಪುರಾಣ ಮೊದಲಾದವು ವಾರಸ್ತ್ರೀಯರ ಹಾಂಗೆ.
ಶಿವಜ್ಞಾನ ಶಾಸ್ತ್ರವು ರಹಸ್ಯವಾಗಿ
ಕುಲಸ್ತ್ರೀಯರಾಗಿಪ್ಪವಯ್ಯ ಶರಣಂಗೆ
ಶಾಂತವೀರೇಶ್ವರಾ
Transliteration Ī liṅgavu patiyu nānē satiyu
hīgemba bhāvadinda āvāgaḷū kūḍi
pan̄cēndriya sambandhavilladātane śaraṇanayya.
Śivatattvave śaraṇa, śaraṇane śivatattva.
Ī ubhayavu kūḍi adu kāraṇa śaraṇasthalavu
sākāra nirākāravāduduyya; mahājñānavādudayya!
Mōkṣavanicchaisuttirda śaraṇaṅge
chandas'su vyākaraṇābhijñānāgabēkemba kāṅkṣeyilla.
Ramya vasanādigaḷalli kāṅkṣeyilla.
Ṣaḍrāsānna mr̥ṣṭānnaṅgaḷalliyu abhilāṣe illa.
Lōkada cinteyu illa.
Mimānse vaiśēṣika n'yāya sāṅkhya pātan̄jali
yōgavemba āru ṣaḍdarśanagaḷu
vēda śāstra purāṇa modalādavu vārastrīyara hāṅge.
Śivajñāna śāstravu rahasyavāgi
kulastrīyarāgippavayya śaraṇaṅge
śāntavīrēśvarā