ಮೀನು ಸ್ನಾನಪರವಾಗಿದ್ದಿತು.
ಸರ್ಪನು ವಾಯುವ ಆಹಾರ ಮಾಡುತ್ತಿದ್ದಿತು.
ಆಡು ಪರ್ಣಾಹಾರಿಯಾಗಿದ್ದಿತು.
ಯಾವಗಲೂ ಇಲಿಯು ಬಿಲದಲ್ಲಿ ಮಲಗಿರುತ್ತಿದ್ದಿತು.
ಕತ್ತೆಯು ಭಸ್ಮೋದ್ಧೂಳನ ತಾತ್ಪರ್ಯ ಉಳ್ಳದ್ದು.
ಭಕ್ತನು ಧ್ಯಾನದಲ್ಲಿ ಪ್ರೀತಿಯುಳ್ಳುದಾಗಿ,
ಶಿವಧ್ಯಾನದಲ್ಲಿ ಪ್ರೀತಿಯುಳ್ಳುದಾಗಿ,
ಶಿವಧ್ಯಾನ ವಿವೇಕ ಹೊರತಾದುದು ಈ ಸಮಸ್ತವೂ ವ್ಯರ್ಥವು.
ತಪಸ್ಸಿಗೆ ಜ್ಞಾನವು ಪ್ರಧಾನವಾಗಿಪ್ಪುದು
ಶಾಂತವೀರೇಶ್ವ
Transliteration Mīnu snānaparavāgidditu.
Sarpanu vāyuva āhāra māḍuttidditu.
Āḍu parṇāhāriyāgidditu.
Yāvagalū iliyu biladalli malagiruttidditu.
Katteyu bhasmōd'dhūḷana tātparya uḷḷaddu.
Bhaktanu dhyānadalli prītiyuḷḷudāgi,
śivadhyānadalli prītiyuḷḷudāgi,
śivadhyāna vivēka horatādudu ī samastavū vyarthavu.
Tapas'sige jñānavu pradhānavāgippudu
śāntavīrēśvarā