ಸಮುದ್ರಂಗಳಲ್ಲಿ ಕ್ಷೀರಸಮುದ್ರವೆ ಶ್ರೇಷ್ಠ.
ಪರ್ವತಂಗಳಲ್ಲಿ ಹೇಮಾದ್ರಿಯೆ ಅಧಿಕ.
ನವಗ್ರಹಂಗಳಿಗೆ ಸೂರ್ಯನೆ ಅಧಿಕ.
ರತ್ನಂಗಳಿಗೆ ಕೌಸ್ತುಭವೆ ಶ್ರೇಷ್ಠ..
ದೇವತೆಗಳಲ್ಲಿ ಪರಮೇಶ್ವರನೆ ಶ್ರೇಷ್ಠ.
ವೃಕ್ಷಂಗಳಲ್ಲಿ ಚಂದನವೆ ಶ್ರೇಷ್ಠ.
ಪಾಕೃತ ಸ್ವಭಾವ ಶಿಷ್ಯರುಗಳಿಗೆ
ಶಿವಲಿಂಗದಲ್ಲಿ ತತ್ಪರನಾದ
ಶ್ರೀಗುರುಸ್ವಾಮಿಯೇ ಪೂಜ್ಯನಯ್ಯ ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಸುಜ್ಞಾನವನು ನಿರಸನವ ಮಾಡಿ ತನ್ನ ಸ್ವರೂಪವನು ತಿಳಿದು ಜ್ಞಾನಸ್ವರೂಪವಾದ ಸರ್ವಾಂಗ ಉಳ್ಳ ಶರಣಂಗೆ ಮಹಾಜ್ಞಾನ ಚಾರಿತ್ರವೆ ಚರಿತ್ರವಲ್ಲದೆ ಅಜ್ಞಾನದಿಂದ ಹೊರತಾದ ದುಃಶೀಲ ಚರಿತ್ರಂಗಗಳಿಲ್ಲವೆಂದು ತೋರುತ್ತಿರಲಾಗಿ ಮುಂದೆ ‘ಶೀಲಸಂಪಾದನೆಯ ಸ್ಥಲ’ವಾದುದು.
Transliteration Samudraṅgaḷalli kṣīrasamudrave śrēṣṭha.
Parvataṅgaḷalli hēmādriye adhika.
Navagrahaṅgaḷige sūryane adhika.
Ratnaṅgaḷige kaustubhave śrēṣṭha..
Dēvategaḷalli paramēśvarane śrēṣṭha.
Vr̥kṣaṅgaḷalli candanave śrēṣṭha.
Pākr̥ta svabhāva śiṣyarugaḷige
śivaliṅgadalli tatparanāda
śrīgurusvāmiyē pūjyanayya śāntavīrēśvarā
Sūtra: Ī prakāradinda sujñānavanu nirasanava māḍi tanna svarūpavanu tiḷidu jñānasvarūpavāda sarvāṅga uḷḷa śaraṇaṅge mahājñāna cāritrave caritravallade ajñānadinda horatāda duḥśīla caritraṅgagaḷillavendu tōruttiralāgi munde ‘śīlasampādaneya sthala’vādudu.