ಹೇಂಗೆ ಸೂರ್ಯನು ಸಮಸ್ತ ರಸಂಗಳನು ಭುಂಜಿಸುವನೊ
ಅಗ್ನಿಯ ಎಲ್ಲಾ ಕಡೆಯಲ್ಲಿಯೂ ಗಮಿಸಿ
ಸಮಸ್ತ ರಸಂಗಳನು ಭಕ್ಷಿಸುವನೊ ಹಾಂಗೆಯೇ
ಶಿವಯೋಗೀಶ್ವರನು
ತೃಪ್ತಿ ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ
ವಿಷಯಂಗಳನು ಷಡ್ವಿಧ ಲಿಂಗಂಗಳಿಗೆ ಅರ್ಪಿಸಿ
ಆ ಪ್ರಸಾದವನು ಅನುಭವಿಸುತ್ತಿರ್ದನಾಗಿ
ಪುಣ್ಯಪಾಪಂಗಳೆಂಬ ದ್ವಂದ್ವ ಕರ್ಮಂಗಳ ಲೇಪವಿಲ್ಲವಯ್ಯ
ಶಾಂತವೀರೇಶ್ವರಾ
Transliteration Hēṅge sūryanu samasta rasaṅgaḷanu bhun̄jisuvano
agniya ellā kaḍeyalliyū gamisi
samasta rasaṅgaḷanu bhakṣisuvano hāṅgeyē
śivayōgīśvaranu
tr̥pti śabda sparśa rūpa rasa gandhaṅgaḷemba
viṣayaṅgaḷanu ṣaḍvidha liṅgaṅgaḷige arpisi
ā prasādavanu anubhavisuttirdanāgi
puṇyapāpaṅgaḷemba dvandva karmaṅgaḷa lēpavillavayya
śāntavīrēśvarā