ಭಕ್ತಂಗೆ ಪೃಥ್ವಿಯೇ ಅಂಗ, ಆ ಅಂಗಕ್ಕೆ ಸುಚಿತ್ತವೆಂಬ ಹಸ್ತ;
ಆ ಹಸ್ತಕ್ಕೆ ಕರ್ಮ ಸಾದಾಖ್ಯ, ಆ ಸಾದಾಖ್ಯ್ಕಕೆ ಕ್ತಿಯಾಶಕ್ತಿ;
ಆ ಶಕ್ತಿಗೆ ಆಚಾರಲಿಂಗ, ಆ ಆಚಾರಲಿಂಗಕ್ಕೆ ನಿವೃತ್ತಿ ಕಲೆ;
ಆ ಕಲೆಗೆ ಘ್ರಾಣೇಂದ್ರಿಯವೆ ಮುಖ,
ಆ ಮುಖಕ್ಕೆ ಸುಗಂಧ ಪದಾರ್ಥ.
ಆ ಪದಾರ್ಥವನು ರೂಪು ರುಚಿ ತೃಪ್ತಿಯನರಿದು
‘ನ’ ಕಾರಮಂತ್ರಯುಕ್ತವಾಗಿ ಶ್ರದ್ಧಾ ಭಕ್ತಿಯಿಂದರ್ಪಿಸಿ
ಆ ಸುಗಂಧ ಪ್ರಸಾದವನು ಭೋಗಿಸಿ ಸುಖಿತ್ತಿಹನಯ್ಯ ಭಕ್ತನು
ಶಾಂತವೀರೇಶ್ವರಾ
Transliteration Bhaktaṅge pr̥thviyē aṅga, ā aṅgakke sucittavemba hasta;
ā hastakke karma sādākhya, ā sādākhykake ktiyāśakti;
ā śaktige ācāraliṅga, ā ācāraliṅgakke nivr̥tti kale;
ā kalege ghrāṇēndriyave mukha,
ā mukhakke sugandha padārtha.
Ā padārthavanu rūpu ruci tr̥ptiyanaridu
‘na’ kāramantrayuktavāgi śrad'dhā bhaktiyindarpisi
ā sugandha prasādavanu bhōgisi sukhittihanayya bhaktanu
śāntavīrēśvarā