•  
  •  
  •  
  •  
Index   ವಚನ - 603    Search  
 
ಒಡಲೆಂಬ ಭಾಜನದಲ್ಲಿ ಷಡ್ವಿಧ ಪದಾರ್ಥವನು ಷಡ್ಲಿಂಗಗಳಿಗೆ ಅರ್ಪಿಸಬಲ್ಲಾತಂಗೆ ಏಕಭಾಜನವಯ್ಯ. ಭಾಜಕ ಮಾನಸ ಕಾಯಂಗಳಿಂದ ರೂಪು ರುಚಿ ತೃಪ್ತಿಯನು ಇಷ್ಟ ಪ್ರಾಣ ಭಾವಲಿಂಗಗಳಿಗೆ ಅರ್ಪಿಸಬಲ್ಲಾತಗೇ ಭಾಜನ ಯೋಗ್ಯವಯ್ಯ ಶಾಂತವೀರೇಶ್ವರಾ
Transliteration Oḍalemba bhājanadalli ṣaḍvidha padārthavanu ṣaḍliṅgagaḷige arpisaballātaṅge ēkabhājanavayya. Bhājaka mānasa kāyaṅgaḷinda rūpu ruci tr̥ptiyanu iṣṭa prāṇa bhāvaliṅgagaḷige arpisaballātagē bhājana yōgyavayya śāntavīrēśvarā