•  
  •  
  •  
  •  
Index   ವಚನ - 634    Search  
 
ಊರ್ಧ್ವ ಹೃತ್ಕಮಲ ಮಧ್ಯದಲ್ಲಿಯ ಚಿದಾಕಾಶ ಸ್ವರೂಪಿನಿಂದೆ ಮಹದಾಶ್ಚರ್ಯ ರೂಪವಾದ ಶಿವಲಿಂಗದೊಡನೆ ದೃಗ್ಯಗೈಕದೋಪಾದಿಯಲ್ಲಿ ಸ್ವರೂಪ ಹಾನಿ ವೃದ್ಧಿ ಇಲ್ಲದೆ ಸಜಾತೀರವಾದ ಸಮಾನ ಸಮರಸತೆಯಿಂದ ಐಕ್ಯ ಸ್ವರೂಪವುಳ್ಳ ಶಿವಲಿಂಗೈಕ್ಯನು ಭಕ್ತಾದಿ ಸ್ಥಲದಲ್ಲಿರುತಿರ್ದ ಸದಾಚಾರ ಸಂಬಂಧದಿಂದ ಪ್ರತ್ಯಕ್ಷಾದ ಮೋಕ್ಷ ಲಕ್ಷ್ಮಿಗೆ ಆಶ್ರಯವಾಗುವನಯ್ಯ ಶಾಂತವೀರೇಶ್ವರಾ
Transliteration Ūrdhva hr̥tkamala madhyadalliya cidākāśa svarūpininde mahadāścarya rūpavāda śivaliṅgadoḍane dr̥gyagaikadōpādiyalli svarūpa hāni vr̥d'dhi illade sajātīravāda samāna samarasateyinda aikya svarūpavuḷḷa śivaliṅgaikyanu bhaktādi sthaladallirutirda sadācāra sambandhadinda pratyakṣāda mōkṣa lakṣmige āśrayavāguvanayya śāntavīrēśvarā