ಜ್ಞಾನಿಯಾದ ಗುರುವಿನ ಸಮಸ್ತ ಕ್ರಿಯೆಗಳು
ಆವ ಸ್ಥಲದಲ್ಲಿ ಲಯವನೆಯ್ದುವವು
ಅದನೆ ಶೈವ ಶಾಸ್ತ್ರಜ್ಞರು ಕ್ರಿಯಾಲಿಂಗವೆಂದು
ಹೇಳುವರಯ್ಯ ಶಾಂತವೀರೇಶ್ವರಾ
Transliteration Jñāniyāda guruvina samasta kriyegaḷu
āva sthaladalli layavaneyduvavu
adane śaiva śāstrajñaru kriyāliṅgavendu
hēḷuvarayya śāntavīrēśvarā