ಆವನಾನೊಬ್ಬನು ಇಷ್ಟಲಿಂಗ ಸಂಬಂಧವಾದ
ಬಾಹ್ಯ ಪೂಜಾ ಕ್ತಿಯೆಯನು ಬಿಟ್ಟು
ಪ್ರಾಣಲಿಂಗ ಸಂಬಂಧವಾದ
ಧ್ಯಾನ ರೂಪವಾದಂಥ ಪೂಜೆಯನು ಬಿಟ್ಟು
ಖಂಡಿತವಿಲ್ಲದ ಜ್ಞಾನವೆ ಸ್ವರೂಪವಾದ
ತೃಪ್ತಿಲಿಂಗವನು ಸೇವಿಸುವನು ಆತನೆ ಮುಕ್ತನಯ್ಯ
ಶಾಂತವೀರೇಶ್ವರಾ
ಸೂತ್ರ : ಆ ಪ್ರಕಾರದಿಂದ ಕ್ರಿಯಾಲಿಂಗ ಭಾವಲಿಂಗ ಜ್ಞಾನಲಿಂಗವೆಂಬ
ತ್ರಿವಿಧ ಲಿಂಗವು ವೃತ್ತ ಗೋಮುಖವು ಗೊಳಕ ಸ್ವರೂಪದಿಂದೇಕವಾದಲ್ಲಿ ಇಷ್ಟಲಿಂಗವು ಭಕ್ತನ ಸ್ವಯಂ ಭಾವ ಗುಣದಲ್ಲಿ ನಿಶ್ಚಲರಾಗಿರ್ದ ಭೇದವೆಂತಿದ್ದಿತ್ತೆಂದೊಡೆ ಮುಂದೆ ‘ಸ್ವಯಲಿಂಗಸ್ಥಲ’ವಾದುದು.
Transliteration Āvanānobbanu iṣṭaliṅga sambandhavāda
bāhya pūjā ktiyeyanu biṭṭu
prāṇaliṅga sambandhavāda
dhyāna rūpavādantha pūjeyanu biṭṭu
khaṇḍitavillada jñānave svarūpavāda
tr̥ptiliṅgavanu sēvisuvanu ātane muktanayya
śāntavīrēśvarāSūtra: Ā prakāradinda kriyāliṅga bhāvaliṅga jñānaliṅgavemba
trividha liṅgavu vr̥tta gōmukhavu goḷaka svarūpadindēkavādalli iṣṭaliṅgavu bhaktana svayaṁ bhāva guṇadalli niścalarāgirda bhēdaventiddittendoḍe munde ‘svayaliṅgasthala’vādudu.